ಹವಾಮಾನ ಸೇವಾದಾತರಾಗಿ The Weather Channel
ಹಲೋ! The Weather Channel, weather.com ವೆಬ್‍ಸೈಟ್, The Weather Channel ಮೊಬೈಲ್ ಆ್ಯಪ್ ಮತ್ತು ಇತರ ಹವಾಮಾನ ಸಂಬಂಧಿತ ಅಪ್ಲಿಕೇಶನ್‍ಗಳ ಮಾಲಿಕತ್ವ ಹೊಂದಿರುತ್ತದೆ ಮತ್ತು ಪ್ರಕಟಿಸುತ್ತದೆ. ಆದರೆ ಕೆಲವೊಮ್ಮೆ, ನಮ್ಮ ಹವಾಮಾನ ಮಾಹಿತಿಯನ್ನು The Weather Channel ಇತರ ಕಂಪನಿಗಳಿಗೂ ಒದಗಿಸುತ್ತದೆ ಮತ್ತು ಕಂಪನಿಗಳು ಈ ಹವಾಮಾನ ಮಾಹಿತಿಯನ್ನು ತಮ್ಮ ವೆಬ್‍ಸೈಟ್‍ಗಳಲ್ಲಿ, ಮೊಬೈಲ್ ಆ್ಯಪ್‍ಗಳಲ್ಲಿ ಮತ್ತು ಇತರ ಅಪ್ಲಿಕೇಶನ್‍ಗಳಲ್ಲಿ ನಿಮಗೆ ಪ್ರಸ್ತುತಪಡಿಸುತ್ತಾರೆ. ಅಂತಹ ನಿರ್ದಿಷ್ಟ ಸಂದರ್ಭಗಳಲ್ಲಿ The Weather Channel ನಿಮ್ಮ ಡೇಟಾವನ್ನು ಹೇಗೆ ಬಳಸುತ್ತದೆ ಎಂಬುದನ್ನು ಈ ಪುಟ ವಿವರಿಸುತ್ತದೆ. ವೈಯಕ್ತಿಕ ಡೇಟಾ ಸಂಗ್ರಹಣೆ, ಬಳಕೆ ಮತ್ತು/ಅಥವಾ ಇತರ ಕಂಪನಿಯ ವೆಬ್‍ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ ಇತರ ಅಪ್ಲಿಕೇಶನ್‍ಗಳ ಹಂಚಿಕೆ ಕುರಿತಾದ ಎಲ್ಲ ಪ್ರಶ್ನೆಗಳಿಗೆ, ದಯವಿಟ್ಟು ಆ ಕಂಪನಿಯ ಗೌಪ್ಯತೆ ನೀತಿಯನ್ನು ಪರಿಶೀಲಿಸಿ.
ಪಿನ್ ಕೋಡ್‌ಗಳು, ನಗರದ ಹೆಸರುಗಳು ಅಥವಾಜಿಯೋಕೋಡ್‌ಗಳಂತಹ (ಅಕ್ಷಾಂಶ/ರೇಖಾಂಶ) ಕೆಲವು ಗುರುತಿಸಬಹುದಾದ ಸ್ವರೂಪಗಳಲ್ಲಿ ನಮಗೆ ಬೇಕಾದ ಸ್ಥಳವನ್ನು ನೀಡಿದರೆ, The Weather Channel ನ ಡೇಟಾ ವಿತರಣಾ ವ್ಯವಸ್ಥೆಗಳು ಬಯಸಿದ ಸ್ಥಳಕ್ಕಾಗಿ ಹವಾಮಾನಮಾಹಿತಿಯನ್ನು ಸ್ವಯಂಚಾಲಿತವಾಗಿ ಒದಗಿಸಬಹುದು. ನೀವು ಬಳಸುವ ಅಪ್ಲಿಕೇಶನ್ ಮೂಲಕ ಸ್ಥಳ ಡೇಟಾವನ್ನು ಸ್ವಯಂಚಾಲಿತವಾಗಿ ನಮಗೆ ಒದಗಿಸಬಹುದು ಅಥವಾ ಇತರ ಕಂಪನಿ ತನ್ನ ವೆಬ್‍ಸೈಟ್ ಅಥವಾ ಅಪ್ಲಿಕೇಶನ್ ವಿನ್ಯಾಸಗೊಳಿಸಿದ ವ್ಯವಸ್ಥೆಯ ಆಧಾರದ ಮೇಲೆ ನೀವು ಹುಡುಕಾಟದ ಮೂಲಕ ಸ್ಥಳವನ್ನು ಟೈಪ್ ಮಾಡಿ ಆಯ್ಕೆ ಮಾಡಬಹುದು. ಯಾವುದೇ ರೀತಿ ಇರಲಿ, The Weather Channel ಆ ಸ್ಥಳಕ್ಕಾಗಿ ಹವಾಮಾನ ಮಾಹಿತಿಯನ್ನು ನಿಮಗೆ ತಲುಪಿಸುವ ಉದ್ದೇಶದಿಂದ ಮಾತ್ರ ಸ್ಥಳ ಡೇಟಾವನ್ನು ಬಳಸುತ್ತದೆ. (ಇದರರ್ಥ ಇತರ ಕಂಪನಿಯ ವೆಬ್ಸೈಟ್ ಅಥವಾ ಅಪ್ಲಿಕೇಶನ್ ನಿಮ್ಮ ಸ್ಥಳ ಡೇಟಾವನ್ನು ಬೇರೆ ಉದ್ದೇಶಗಳಿಗಾಗಿ ಬಳಸುವುದಿಲ್ಲ ಎಂದು ಹೇಳಲಾಗದು, ಆದ್ದರಿಂದ ಹೆಚ್ಚಿನ ಮಾಹಿತಿಗಾಗಿ ಇತರ ಕಂಪನಿಯ ಗೌಪ್ಯತೆ ನೀತಿಯನ್ನು ನೋಡಿ.) ಅಗತ್ಯವಿದ್ದಲ್ಲಿ, ನೀವು ಬಳಸುತ್ತಿರುವ ಆಪರೇಟಿಂಗ್ ಸಿಸ್ಟಮ್ (ಓಎಸ್), ಬ್ರೌಸರ್ ಅಥವಾ ಮೊಬೈಲ್ ಅಪ್ಲಿಕೇಶನ್ ನಿಮ್ಮ ಸ್ಥಳ ಡೇಟಾವನ್ನು ಬಳಸಲು ಅನುಮತಿ ಕೇಳಬಹುದು ಅಥವಾ ನಿಮ್ಮ ಸ್ಥಳ ಡೇಟಾವನ್ನು ಬಳಸಲಾಗುತ್ತಿದೆ ಎಂಬುದರ ಸೂಚನೆಯನ್ನು ನಿಮಗೆ ತೋರಿಸಬಹುದು. ಈ ಸಂಭವನೀಯು, ನೀವು ಬಳಸುತ್ತಿರುವ ಓಎಸ್, ಬ್ರೌಸರ್ ಅಥವಾ ಅಪ್ಲಿಕೇಶನ್ ಮೇಲೆ ಮತ್ತು ನೀವು ಈ ಹಿಂದೆ ಅನುಮತಿ ನೀಡಿರುವುದರ ಮೇಲೆ ಅಥವಾ ಈ ಮೊದಲು ಸೂಚನೆಯನ್ನು ನೋಡಿರುವುದರ ಮೇಲೆ ಅವಲಂಬಿಸಿರುತ್ತದೆ. ದಯವಿಟ್ಟು ಗಮನಿಸಿ, The Weather Channel ನೀವು ಬಳಸುತ್ತಿರುವ ಓಎಸ್, ಬ್ರೌಸರ್ ಅಥವಾ ಅಪ್ಲಿಕೇಶನ್ ಮಾಲೀಕತ್ವ ಹೊಂದಿರುವುದಿಲ್ಲ ಮತ್ತು ಅವುಗಳನ್ನು ನಿರ್ವಹಿಸುವುದಿಲ್ಲ ಅಥವಾ ಉಸ್ತುವಾರಿ ವಹಿಸುವುದಿಲ್ಲ ಆದ್ದರಿಂದ, ನೀವು ನಿಮ್ಮ ಸ್ಥಳವನ್ನು ಬಳಸುವುದಕ್ಕೆ ಅನುಮೋತಿ ಕೋರಿ ಯಾವಾಗ ಸೂಚನೆ ಅಥವಾ ವಿನಂತಿಯನ್ನು ಸ್ವೀಕರಿಸುತ್ತೀರಿ ಎಂಬುದನ್ನು ನಿಯಂತ್ರಿಸಲು ನಮಗೆ ಸಾಧ್ಯವಾಗುವುದಿಲ್ಲ.
ಅಂಚೆ ವಿಳಾಸಗಳಿಲ್ಲದೆ ಜನರು ಪರಸ್ಪರ ಪತ್ರಗಳನ್ನು ಕಳುಹಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಇಂಟರ್‌ನೆಟ್‌ನಲ್ಲಿ ಸಾಧನಗಳು IP ವಿಳಾಸಗಳಿಲ್ಲದೆ ಸಂವಹನ ನಡೆಸಲು ಸಾಧ್ಯವಿಲ್ಲ. ಇದರಿಂದಾಗಿ, ಇತರ ಕಂಪನಿಯ ವೆಬ್ಸೈಟ್ ಅಥವಾ ಅಪ್ಲಿಕೇಶನ್ IP ವಿಳಾಸವನ್ನು ಬಳಸುತ್ತದೆ ಮತ್ತು ಈ ಮೂಲಕ ನಾವು ನಿಮ್ಮ ಸಾಧನಕ್ಕೆ ಹವಾಮಾನ ಮಾಹಿತಿಯನ್ನು ಒದಗಿಸಬಹುದು. ಅಂತಹ ಸಮಯದಲ್ಲಿ ನಿಮ್ಮ ಸಾಧನಕ್ಕೆ ನಿಯೋಜಿಸಲಾದ IP ವಿಳಾಸ ಅಥವಾ ಅವರ ಆಂತರಿಕ ವ್ಯವಸ್ಥೆಗಳ IP ವಿಳಾಸವನ್ನು ಬಳಸಿಕೊಂಡು ಮತ್ತೊಂದು ಕಂಪನಿ The Weather Channel ನೊಂದಿಗೆ ಸಂವಹನ ಮಾಡಬಹುದು. ಅದು ಏನೇ ಅಗಿರಲಿ, The Weather Channel ನಿಮಗೆ ಹವಾಮಾನ ಮಾಹಿತಿಯನ್ನು ತಲುಪಿಸುವ ಏಕಮಾತ್ರ ಉದ್ದೇಶದಿಂದ IP ವಿಳಾಸವನ್ನು ಬಳಸುತ್ತದೆ.
“The Weather Channelನ ಗೌಪ್ಯತಾ ನೀತಿ ನನಗೆ ಯಾವಾಗ ಅನ್ವಯಿಸುತ್ತದೆ?” ಎಂಬುದರ ಕುರಿತು ನೀವು ಯೋಚಿಸುತ್ತಿರಬಹುದು. The Weather Channelನ ಗೌಪ್ಯತಾ ನೀತಿ ಬಳಕೆದಾರರು ಸೈಟ್, ಮೊಬೈಲ್ ಅಪ್ಲಿಕೇಶನ್ ಅಥವಾ The Weather Channel ಪ್ರಕಟಿಸಿದ ಮತ್ತು ಮಾಲೀಕತ್ವದ ಇತರ ಅಪ್ಲಿಕೇಶನ್‌ಗೆ ಭೇಟಿ ನೀಡಿದಾಗ ಮಾತ್ರ ಅನ್ವಯಿಸುತ್ತದೆ.